ಪುಟಗಳು

ಶುಕ್ರವಾರ, ಜನವರಿ 15, 2010

ಮುನಿಸು ತರವೇ?


ನೋಡುನೋಡುತ್ತಿದ್ದಂತೆ..ನಮ್ಮ ರಂಗಿ ದೊಡ್ಡವಳಾದಳು.. ಮತ್ತೆ..ಅವಳಿಗೂ.ರಾಜನೊಂದಿಗೆ ಪ್ರೀತಿಯ ಹೊಸ ಪಲ್ಲವಿ ಪಲ್ಲವಿಸ ತೊಡಗಿತು...ಅವಳ  ಕನಸು ಕಣ್ಣುಗಳಲ್ಲಿ  ಇವನ ಕನಸು....ಮಾತಿನಲ್ಲಿ ಒಲವ ರಸ ಸುಧೆ...ನೋಡಲು ಬಲು ಚಂದ...ಮೊದಮೊದಲ ಪ್ರೇಮದಲ್ಲಿ..ಕೆಲದಿನಗಳ ನಂತರ ..ಸಣ್ಣ ಮುನಿಸು ..complaints....ಬರುಬರುತ್ತಾ...ಏಕೋ ಏನೋ ಗೊತ್ತಿಲ್ಲ.ಜಗಳ ಶುರುವಾಯಿತು....ಪ್ರೀತಿಸದವರ ಸಂಬ್ರಮ ನೋಡಲು ಬಲು ಚಂದ...ಮುನಿಸಾದರೆ...ಮನಸ್ಸಿಗೆ ಬಹಳ ಕಷ್ಟ..ನಾನಂತೂ"ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು...ಅಳ್ತಾವ ಭೂತಾಯಿ ಮನಸು" ಅಂತ ಥೇಟ್ ಶಿವರಾಂ ಹಾಗೆ ಹಾಡಲಾರಂಭಿಸಿದ್ದೆ....ಅಂದೊಂದು ದಿನ ..ಬೆಳಿಗ್ಗೆ ರಂಗಿಯ ತಲೆದಿಂಬಿನ ಕೆಳಗೊಂದು ಪತ್ರ ಸಿಕ್ಕಿತು....ರಾಜಂಗೆ ಬರ್ದಿದ್ದು..........ಅದು ಹೀಗಿತ್ತು...

"ರಾಜಾ...
ಮನುಷ್ಯ ಏಕೆ ಮತ್ತೆ ಮತ್ತೆ ಮರಳಬಯಸುತ್ತಾನೆ: ಅದೇ ಕೆಲಸಕ್ಕೆ, ಅದೇ ಹೆಣ್ಣಿಗೆ, ಅದೇ ಮನೆಗೆ, ಅದೇ ಊರಿಗೆ?
ತುಂಬಾ ಸಲ ಯೋಚಿಸಿ ಸುಸ್ತಾಗಿದ್ದಿದೆ. ನಿಂಗೇ ಗೊತ್ತಲ್ಲ, ನಾನು ನಿನ್ನೊಂದಿಗೆ ಜಗಳ ಮಾಡಿದರೂ ನೀನೇ ಬೇಕು ಅಂತಾ ಮಗುವಿನಂತೆ ನಿನ್ನ ಹಿಂದೆ ಬರುವುದು ಏಕೆ?.....ನೀನೇ ನನ್ನ ಜೀವದ ಅತ್ಯಂತ ಪ್ರೀಯನಾದ್ರೂ ನಿನ್ನೊಂದಿಗೆ ಎಷ್ಟೊಂದು ಸಾರಿ ಜಗಳಕ್ಕೆ ಬೀಳುತ್ತೇನೆ, (ಅದನ್ನು ನೀನೂ ಮಾಡ್ತೀಯ) ... ಒಂದು ಸಲ, ಎರಡು ಸಲ, ಹತ್ತು ಸಲ! ಜಗಳ ಒಂದು ಹಂತದಲ್ಲಿ ಎಷ್ಟು ಅಸಹನೀಯವಾಗುತ್ತದೆ ಅಂದರೆ ಇವತ್ತಿಗೆ ಮುಗಿಯಿತು: ಇನ್ನು ನಿನ್ನ ಹತ್ತಿರ ಮಾತಾಡುವುದಿಲ್ಲ ನೋಡುವುದಿಲ್ಲ ಅಂತ ನಿರ್ಧರಿಸುವಷ್ಟು..gift., ಪತ್ರ, ಗ್ರೀಟಿಂಗ್ಸು, ಹಾಳು-ಮೂಳು ಎಲ್ಲ ಎಸೆದು ಇನ್ನು ಈ ಬಂಧ ಮುಗಿದೇ ಹೋಯಿತು ಅಂತ ಭಾವಿಸುವಷ್ಟು... ಸ್ವಲ್ಪ ಹೊತ್ತು ನಿರಾಳ ನಿರಾಳ. ಆದರೆ ನಿಧಾನವಾಗಿ ಒಂದು ಯೋಚನೆ ಶುರುವಾಗುತ್ತದೆ.ಈ ಜಗಳವನ್ನು ನೀನು ಹೇಗೆ ರಿಸೀವ್ ಮಾಡಿಕೊಂಡೆಯೋ? ನನ್ನಂತೆಯೇ ನಿರಾಳನಾದೆಯಾ? ಅಥವಾ ಹರ್ಟ್ ಆದೆಯಾ? ನೀನು ನನ್ನಂತೆಯೇ ನಿರಾಳವಾಗಿದ್ದರೆ ನನಗಿಷ್ಟವಾಗುತ್ತದಾ? ಅಥವಾ ಹರ್ಟ್ ಆಗಿ, ನನಗೋಸ್ಕರ ಕಾತರಿಸುತ್ತಿದ್ದರೆ ಇಷ್ಟವಾಗುತ್ತದಾ? ನೀನು ನನ್ನ ಕೈಯಿಂದ ಜಾರಿ ಹೋದರೆ ಗತಿ? ನೀನು ಇನ್ನೊಂದು ಸಂಬಂಧಕ್ಕೆ ಕೈ ಚಾಚುತ್ತಿದ್ದರೆ? ಹೀಗೆ ಶುರುವಾಗುವ ಪ್ರಶ್ನೆಗಳು, ತವಕಗಳು, ಅನುಮಾನ ಆತಂಕಗಳು ಕಡೆಗೆ ನನ್ನನ್ನು ಎಲ್ಲಿಗೆ ಒಯ್ದು ಮುಟ್ಟಿಸುತ್ತೇವೆಯೆಂದರೆ, ನನಗೆ ಗೊತ್ತಿಲ್ಲದೆ ನಿನ್ನಲ್ಲಿಗೆ ಹಿಂತಿರುಗಿರುಗುವಂತೆ ಮಾಡುತ್ತದೆ....

ಮತ್ತು ನೀನು "ನಂಗೊತ್ತಿತ್ತು" ಎಂಬಂತೆ ನನಗೋಸ್ಕರ ಕಾಯುತ್ತಾ ನಿಂತಿರುತ್ತೀಯಾ....ಬಹುಷಃ ಪದೇ ಪದೇ ಜಗಳವಾಡುವ ನಮ್ಮನ್ನು ಮತ್ತೆ-ಮತ್ತೆ ಹಿಂತಿರುಗುವಂತೆ ಮಾಡುವ ಅಂಶವೇ ಈ "ದಿಗಿಲು"ಅಲ್ಲವಾ? ನೀನು ಏನಾದರೂ ಮಾಡಿಕೊಂಡರೆ ಎಂಬ ದಿಗಿಲಿನಿಂದ ಹಿಡಿದು ಮತ್ತೊಬ್ಬರಲ್ಲಿಗೆ ಹೋಗಿಬಿಡುತ್ತೇಯೆನೋ ಎಂಬಲ್ಲಿಯ ತನಕ ಈ ದಿಗಿಲು ಬೆಂಬಿಡದೇ ಬೇಟೆಯಾಡುತ್ತದೆ...ನನಗಂತೂ,,,, ನಿನ್ನೊಂದಿಗಿದ್ದಾಗ ಪಟ್ಟ ಆನಂದ, ಸಂತೋಷ, ಉಕ್ಕಿದಪ್ರೀತಿ, ಅನುಭವಿಸಿದ ಹೆಮ್ಮೆ, ಸುಖ, ಡಿಪೆಂಡೆನ್ಸ್- ಎಲ್ಲವೂ ಸೇರಿ , ಮತ್ತೆ ಅದೇ ಹೊಂದಾಣಿಕೆಯೇ ಬೇಕು ಅನ್ನಿಸಿ ಮತ್ತೆ ನಿನ್ನಲ್ಲಿಗೇ ಮರಳುವಂತೆ ಮಾಡಿಬಿಡುತ್ತದೆ. ಅದರಲ್ಲೂ, ನಾನು ಹಾಗೆ ಹಿಂತಿರುಗಲಿ ಅಂತ ನೀನು ಕೂಡ ಕಾಯುತ್ತಿದ್ದೆ , ಹಿಂತಿರುಗದೇ ಹೋಗಿರದಿದ್ದರೆ ನಿನಗೂ ನಾನಿಲ್ದೆ ಬದುಕಲಾಗುತ್ತಿರಲಿಲ್ಲ ಅಂತ ಗೊತ್ತಾದ ಘಳಿಗೆಯಲ್ಲಿ ಆಗುವ ಆನಂದವಿದೆಯಲ್ಲ? ಅದು ನನ್ನ "ಪ್ರೀತಿ"ಯ ದಿಗ್ವಿಜಯದ ಘಳಿಗೆ.

ಆದರೆ.... ಈ ಎಲ್ಲ ಅನುಭವಗಳು ನಿನಗೂ ಆಗದೆ ಹೋದೀತಾ ಚಿನ್ನಾ ..

ಆದರೆ ನೆನಪಿರಲಿ, ಇಂಥ ಜಗಳ ಮತ್ತು ಪುನರ್ಮಿಲನಗಳು ನಮ್ಮಂಥ  ಪ್ರೇಮಿಗಳಿಬ್ಬರ ನಡುವೆ ಆದಷ್ಟು ತೀವ್ರವಾಗಿ, aggressive  ಆಗಿ ಗಂಡಹೆಂಡತಿಯರ ನಡುವೆ ಆಗುವುದಿಲ್ಲ. ನಾನು ಅಕ್ಕನ ನೋಡುತ್ತಿರುತ್ತೀನಲ್ಲ...ಅಲ್ಲೂ ಜಗಳವಿದೆ. ಆದರೆ "ಮುಗೀತು ನಡಿ" ಎಂದು ಬಂಧ ಹರಕಂಡು ಹೋಗುವುದು ಅಲ್ಲಿ ಪದೇಪದೇ ಸಾಧ್ಯವಿಲ್ಲ. ಏಷ್ಟೇ ಮುನಿದುಕೊಂಡು ಹೋದರೂ ಸಂಜೆ ಹೊತ್ತಿಗೆ ಬರ್ತಾನೆ ಬಿಡು, ಎಂಬ ಧೈರ್ಯ ಅವಳಿಗಿರುತ್ತದೆ. ತವರಿಗೆ ಹೋದವಳು ಬಾರದಿರುತ್ತಾಳಾ ಎಂಬ ಗ್ಯಾರಂಟಿ ಅವನಿಗಿರುತ್ತದೆ. ಯಾವತ್ತೋ ಒಂದು ದಿನ, ಅವರಿಬ್ಬರೂ ಸರಿಯಾಗಿ ರಾಜಿಯೇ ಆಗಿಲ್ಲ ಎಂಬುದು ಕೂಡ ನೆನಪಾಗದಂತೆ ಜಗಳ ಮುಗಿದುಹೋಗುತ್ತದೆ.ಆದರೆ ಇಂಥದ್ದು, ..ನಮ್ಮ   ಸಂಬಂಧದಲ್ಲಿ ಆಗುವುದು ಕಷ್ಟ. ಯಾಕೆಂದರೆ ನಮ್ಮಿಬ್ಬರ ಮಧ್ಯೆ ಮದುವೆ ಎಂಬ 'ದಾರ' ಇಲ್ಲ. ತುಂಬ ಘನವಾದ ಪ್ರೀತಿಯಿರಬಹುದು. ಆದರೆ ಈ ಪ್ರೀತಿ ಬಿಟ್ಟು ನಮಗೆ ಇನ್ನೊಂದು 'ಆಯ್ಕೆ ' ಇಲ್ಲವೇ ಇಲ್ಲ ಎಂಬ ಆತಂಕವಿರುವುದಿಲ್ಲ. ಮದುವೆಯಾದವರ ನಡುವೆ ಮಕ್ಕಳಿರುತ್ತಾರೆ.ಇವರ ಮಧ್ಯೆ ಕೇವಲ ಮಕ್ಕಳ ಬಗ್ಗೆ ಮಾತಿರುತ್ತದೆ, ಕನಸಿರುತ್ತದೆ. ಕಣ್ಣೆದುರಿಗಿನ ಮಕ್ಕಳು ಕಟ್ಟಿಹಾಕಿದಷ್ಟು ಬಲವಾಗಿ ಕನಸಿನ ಮಕ್ಕಳು ಕಟ್ಟಿಹಾಕಲಾರರು....ಅಲ್ಲವೇ?

ಹಾಗಾದರೆ, ಮದುವೆಯಾಚಗಿನ ನಮ್ಮ ಈ ಸಂಬಂಧವನ್ನು ಜಗಳಗಳ, ಮುನಿಸುಗಳ, "ಮುಗೀತು ನಡಿ"ಗಳ ಅಪಾಯದಿಂದ ರಕ್ಷಿಸಿಕೊಳ್ಳುವುದು ಹೇಗೆ? ಶರಂಪರ ಜಗಳ-ರಾದ್ಧಾಂತಗಳ ನಂತರವೂ ಒಂದಾಗಿ, ಮತ್ತೆ ಸಂತೋಷವಾಗಿರುವುದು ಬೇರೆ. ಅಂಥ ಶರಂಪರ ಜಗಳಗಳೇ ಆಗದಿರುವಂತೆ ನೋಡಿಕೊಳ್ಳುವುದು ಹೇಗೆ? ಸಂಬಂಧದ ಆರೋಗ್ಯವನ್ನು ಮದುವೆಯ ಹರಕತ್ತಿಲ್ಲದೇ ಕಾಪಾಡಿಕೊಳ್ಳುವುದು ಹೇಗೆ?

ಜಗಳವಾದ ನಂತರವೂ ನಿನ್ನ ಮೇಲಿನ ನನ್ನ ಪ್ರೀತಿ ಚೂರೂ ಕಡಿಮೆ ಆಗದಿದ್ದುದರಿಂದ.......ಕೆಲವು ನಿರ್ಧಾರ ನಾನು ತಗೊಂಡಿದ್ದೇನೆ....ನೀನು ಇದಕ್ಕೆ ಸಹಕರಿಸಿದರೆ ನಮ್ಮ ಸಂಬಂಧದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು ರಾಜಾ..,,,,

ಯಾವುದೇ ಕಾರಣಕ್ಕೂ ಈ ಜಗಳಗಳನ್ನು "ಇವು ಇದ್ದಿದ್ದೇ ಬಿಡು" ಅಂಥ ಹಗುರವಾಗಿ ತೆಗೆದುಕೊಳ್ಳಬಾರದು ಅಂಥ ಅಂದುಕೊಂದಿದ್ದೇನೆ...ಜಗಳದ ನಂತರ 'ಹೋದ ಸಲದ ಹಾಗೆ ಬರ್ತಾನೆ ಬಿಡು'ಅಂತ ಅಂದುಕೊಳ್ಳಬಾರದು. i want to be serious about  our relationship.. ....ಸಾಮಾನ್ಯವಾಗಿ ಜಗಳಗಳು ಒಂದೇ ಕಾರಣಕ್ಕಾಗಿ ರಿಪೀಟ್ ಆಗುತ್ತಿರುತ್ತವೆಯಲ್ಲ,, ಇನ್ನು ಜಗಳದ ಆ ಕಾರಣ ಹುಡುಕಿ , ಅದನ್ನು ಬುಡ ಸಮೇತ ನಾಶಮಾಡೋಣ ಅಂದ್ಕೊಂಡಿದ್ದೇನೆ...ಸರಿ ಅಲ್ಲವೇ? .

ಜಗಳದ ನಂತರ, ಒಳ್ಳೇ ಮೂಡ್ ನಲ್ಲಿ ಇದ್ದಾಗ ತುಂಬ ಪ್ರಾಮಾಣಿಕವಾಗಿ ಕ್ಷಮೆ ಕೇಳಿಬಿಡಬೇಕು...ಅದೂ ಸೌಜನ್ಯಪೂರ್ವಕವಾಗಿ... ಕ್ಷಮೆ ಕೇಳುವಾಗ "ನೀನು ಹಾಗೆಲ್ಲ ಮಾತಾಡಿದ್ದಕ್ಕೇ , ನಾನು ಹಾಗೆ ಮಾಡಿದೆ" ಅಂಥ ಸಮರ್ಥಿಸಿಕೊಳ್ಳದೇ....

ಮುಖ್ಯವಾಗಿ, ನಾವಿಬ್ಬರು ಬೇರೆಯಾದರೆ , ದೂರವಾದರೆ, ನಮ್ಮಿಬ್ಬರಿಗೂಬೇರೆ 'ಪರ್ಯಾಯ'ಗಳಿಲ್ಲಎಂಬುದನ್ನು ಇಬ್ಬರೂ ಮನದಟ್ಟು ಮಾಡಿಕೊಳ್ಳಲೇಬೇಕು ಚಿನ್ನು....ಅದರರ್ಥ, ಸಾವಿರ ಜಗಳವಾದರೂ ಗತಿಯಿಲ್ಲದೆ ನಾನು ಒಬ್ಬರಿಗೊಬ್ಬರು ಬರ್ತೇವೆ ಎಂದಲ್ಲ....ನಮ್ಮ "ಈ" ಜಗತ್ತಿನಲ್ಲಿ ನಮಗೆ ಯಾರೂ ಇಲ್ಲವಾದ್ದರಿಂದ, ಒಬ್ಬರನ್ನೊಬ್ಬರು ಬಿಟ್ಟು ಬಾಳಲು ನಮ್ಮಿಬ್ಬರಲ್ಲೂ ಅಸಾಧ್ಯವಾದ್ದರಿಂದ, ನಾವು ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತೇವಾದ್ದರಿಂದ, ಈಗ  ನಮ್ಮಿಬ್ಬರ ಮಧ್ಯೆ 'ಮದುವೆ' ಎಂಬ ಜಗತ್ತಿಗೆ ಕಾಣುವ ಬಂಧ ಇಲ್ಲವಾದ್ದರಿಂದ......ನಾವು ಜಗಳವಾಡಕೂಡದು, ಬೇರೆಯಾಗಕೂಡದು ಆಂಥ ಮನದಟ್ಟು ಮಾಡಿಕೊಳ್ಳಲೇಬೇಕು.... ಪ್ರತೀ ಜಗಳವೂ ನಮ್ಮಿಬ್ಬರ ನಡುವಿನ ಬಲವಾದ ಹಗ್ಗದ ಕೆಲವು ದಾರಗಳನ್ನು ತುಂಡರಿಸಿ, ಹಗ್ಗವನ್ನು ಬಲಹೀನಗೊಳಿಸಬಹುದಲ್ಲವೆ??..

ಅಷ್ಟಕ್ಕೂ,, ನಾವೇನು ಸಾವಿರ ವರ್ಷ ಬದುಕಿರುತ್ತೇವಾ? ಸಾಯಲು ಅವೆಷ್ಟು ದಿನಗಳು ಬಾಕಿಯಿವೆಯೋ? ಈಗ ಜಗಳವೇಕೆ ಅಲ್ವಾ ಚಿನ್ನು?.

ಪ್ರೀತಿಯೊಂದಿಗೆ...
ನಿನ್ನ ರಂಗಿ.."


ಪತ್ರವನ್ನು ಓದುತ್ತಿರುವಂತೆ ಕಣ್ಣುಗಳಲ್ಲಿ ಬಂದ ಸಂತಸದ ನೀರಿಂದ ಕಣ್ಣು ಚೂರು ಮಸುಕಾಗಿತ್ತು...ರಂಗಿಯ ಮುಗ್ಧತೆಗೆ, ಬದ್ಧತೆಗೆ..ಅವಳ ಪ್ರೀತಿಯ ರೀತಿಗೆ,  ಮನತುಂಬಿ..ಮಲಗಿದ್ದ ರಂಗಿಯ  ಹಣೆಗೊಂದು ಮುತ್ತನಿಕ್ಕಿ..ಬಂದೆ..ಮನ ನಿರಾಳ..ನಿರಾಳವಾಗಿತ್ತು...ನೀವೇ ಹೇಳಿ..ನಮ್ಮ  ರಂಗಿಯಂತ ಗೆಳತಿ ಎಲ್ಲರಿಗೂ ಸಿಕ್ಕುತ್ತಾಳಾ.. .? ?

7 ಕಾಮೆಂಟ್‌ಗಳು:

  1. nijwaglu munisu taravalla, anta ansodu prati jagla aagi normal admele, But, prati sarti, guilt kaadatte, matte naavu naave, annodu gottidru jagla maadteevalla, adu preeti iddalli maatra saadya.... chennagi bardideera.. Thanks for nice blog...

    ಪ್ರತ್ಯುತ್ತರಅಳಿಸಿ
  2. hey sandhya
    too good dear.....

    jagala omme anivarya aadaroo..adannu avoid mada bahudu alve?...
    gud..

    ಪ್ರತ್ಯುತ್ತರಅಳಿಸಿ
  3. ಹಲೋ..ಸಂಧ್ಯಾ...ನಿಮ್ಮ ಬ್ಲಾಗ್ ತುಂಬಾ ಚನ್ನಾಗಿದೆ..
    ಮೊನ್ನೆ ಮೊನ್ನೆಯಷ್ಟೇ..ನನ್ನ ಮತ್ತು ನನ್ನ ಗೆಳತಿಯ ನಡುವೆ ಜಗಳ ಆಗಿತ್ತು...ನಿಮ್ಮ ಬ್ಲಾಗ್ ನೋಡಿದೆ..ಹೌದಲ್ಲಾ..ಅನಿಸ್ತಿದೆ...ಎಷ್ಟು ಸಿಲ್ಲಿ ಕಾರಣಕ್ಕೂ ಜಗಳ ಆಡಿಬಿಡ್ತೀವಿ ಅಲ್ವೇ?

    ಪ್ರತ್ಯುತ್ತರಅಳಿಸಿ
  4. ಕೆಲವೊಂದು ಮಾತುಗಳು ಮನಸ್ಸನ್ನು ಹಾಗೆ ಹಿಡಿದಿಟ್ಟುಕೊಳ್ಳುತ್ತವೆ..."ಸಾಯಲು ಅದೆಷ್ಟು ದಿನ ಬಾಕಿ ಇದೆಯೋ..ಜಗಳ ಏಕೆ? " ತುಂಬಾ ಇಷ್ಟ ಆಯ್ತು...

    ಪ್ರತ್ಯುತ್ತರಅಳಿಸಿ