ಪುಟಗಳು

ಶುಕ್ರವಾರ, ಮೇ 7, 2010

                                          ನೆನಪು..ಕೆಲವು ಬಗೆ..


೧)....
ಮಳೆ ಬಂದು ನಿಂತ ಮೇಲೆ
ಮರದಿ  ತೊಟ್ಟಿಕ್ಕುವ ಹನಿಯಂತೆ...
ನಿನ್ನ ನೆನಪು...


೨)...
ಬಲುದೂರ ಹೋದರೇನು...?
ಬಳಿಬಂದು ಕುಳಿತರೇನು..?
ನನ್ನೊಳಮನದಲ್ಲಿ ಹಾಡುವ
ಒಲವ ಹಕ್ಕಿ...
ನಿನ್ನ ನೆನಪು...


೩)...
ಕಲ್ಲುಸಕ್ಕರೆಯ ಸವಿ 
ಸವಿದಷ್ಟೂ ..ಹೆಚ್ಚು...
ನಿನ್ನ ಪ್ರೀತಿಯೂ ಹಾಗೇನೆ..
ನೆನೆನೆನೆದಷ್ಟು ಮುದಗೊಳಿಸುವುದು...
ನಿನ್ನ ನೆನಪು...


೪)...
ಚಿಂತೆ ವ್ಯಾಕುಲಗಳ ನಡುವೆ 
ಬೀಳುವ ಒಂದೇ ಒಂದು ಸುಂದರ ಕನಸು..
ನಿನ್ನ ನೆನಪು...


೫)....
ಈ ಜೀವನದ ಪಯಣದಲಿ..
ಸುಡುಬಿಸಿಲ ಹಾದಿಯಲಿ..
ಮಧ್ಯೆ ಸಿಗುವ ತಂಗುದಾಣ...
ನಿನ್ನ ನೆನಪು...


೬)...
ಸಿಹಿ ಇರಲಿ..ಕಹಿ ಇರಲಿ..
ಹುಸಿಮುನಿಸೆ ತುಂಬಿರಲಿ..
ಸದಾ, ಎಡಬಿಡದೆ..ಕಾಡುವ
ಸಂಗಾತಿಗಳು..
ನಿನ್ನ..ನೆನಪುಗಳು.... 
    

7 ಕಾಮೆಂಟ್‌ಗಳು: