ಅಂದು..mostly..ನಾನು 2nd PUC ನಲ್ಲಿ ಇದ್ದೆ. ಅಂದು ನಮ್ಮದು sendoff ಪಾರ್ಟಿ.ನಮ್ಮೆಲ್ಲಾ ಗೆಳತಿಯರ ಕಲರವ..ಇವರ ಜೊತೆ ನಮ್ಮ ರಂಗಿ ನನ್ನೊಂದಿಗೆ.....buy one get one free ಎಂಬಂತೆ.., ಗೆಳತಿಯರೊಂದಿಗೆ ಏನೇನೋ ಹಾಳು ಹರಟೆಗಳು..ಬೇರ್ಪಡುವಾಗ ಆಡುವ ನೂರೆಂಟು ಮಾತುಗಳು..ಇದರೆಲ್ಲದರ ನಡುವೆ ಒಬ್ಬ ಗೆಳತಿ ಹಠಾತ್ತನೆ ಇನ್ನೊಬ್ಬಳನ್ನು ಕೇಳಿದಳು.."ನಿನ್ನ ಕನಸಿನ ಹುಡುಗ ಹೇಗಿರಬೇಕು?"
ಇದೆಲ್ಲಾ ಕಾಲೇಜು ಕನ್ಯೆಯರ common toppic ತಾನೇ? ಒಬ್ಬೊಬ್ಬರ ಕನಸು ಒಂದೊಂದು ರೀತಿಯಲ್ಲಿತ್ತು..ಆದರೂ ಎಲ್ಲರ ಕಲ್ಪನೆಯೂ ಸಿನಿಮಾ ತಾರೆಯರನ್ನೋ.ಅಥವಾ ಖ್ಯಾತ ಕ್ರೀಡಾಪಟುಗಳನ್ನೋ ಸುತ್ತುತ್ತಿತ್ತು..ಇರುವರೆಲ್ಲವರಲ್ಲೇ ಸ್ವಲ್ಪ ವಿಚಾರವಂತರೆನಿಸಿದವರು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಂದ ಪ್ರಭಾವಕ್ಕೆ ಒಳಗಾದವರಂತಿದ್ದರು...ಒಬ್ಬಳಂತೂ ಸ್ವಲ್ಪ ಮುಂದುವರಿದೇ ಹೇಳಿದಳು."ಅವನು ನೋಡೋಕೆ ಆಮೀರ್ ಖಾನ್. ಥರ ಇರಬೇಕು..ಮಾತು ಅಭಿಷೇಕ್ ಥರ..ಧೈರ್ಯದಲ್ಲಿ..'ನಾಯಕ್ ' ಚಿತ್ರದ ಅನಿಲ್ ಕಪೂರನಂತಿರಬೇಕು...ಹೀಗೆ ಒಂದೊಂದು ವಿಷಯದಲ್ಲಿ ಒಬ್ಬೊಬ್ಬರನ್ನೇ ಆರಿಸಿ, ಆ ಗುಣಗಳನ್ನೆಲ್ಲಾ..ಹೊಂದಿರಬೇಕಾದ ವ್ಯಕ್ತಿಯ ಚಿತ್ರಣ ಮಾಡುತ್ತಿದ್ದಳು...ಇನ್ನೊಬ್ಬಳು ತಾನು ತುಂಬಾ ವಿಭಿನ್ನಲೆಂದು ತೋರಿಸಲೆಂತೋ ಏನೋ....",:he should be my friend , philosopher and guide ..."ಅಂದಳು..ಸುಮ್ಮನಿರದ ನಮ್ಮ ರಂಗಿ..ಹಾಗಂದ್ರೆ?..ಅನ್ನೋದೇ?...ನಾ ನಗುತ್ತಾ ಅಂದೆ..ಅಂದ್ರೆ..ರಂಗಿ..ಇವಳ ಮಾಡುವೆ ಆಗೋ ಹುಡುಗ..ಗೆಳೆಯ., ಮಾರ್ಗದರ್ಶಕ ಮತ್ತೆ ..ಒಳ್ಳೆ ಉಪದೇಶ ಕೊಡುವವನಾಗಿರಬೇಕು..ಅಂದ್ರೆ..ಅವಳು .ಮತ್ತೂ .ಜೋರಾಗಿಯೇ ನಕ್ಕು.."ಅಂದ್ರೆ.. ತತ್ವಜ್ಞಾನಿ..ಅನ್ನಿ..ಹಾಗಾದ ಮೇಲೆ ಅವ ನಿನ್ನನ್ನೇಕೆ ಮಾಡುವ ಆಗ್ತಾನೆ ಅಕ್ಕಾ..ನೀವು ಲವ್ ಮಾಡಿ ಮದುವೆ ಆದರೂ ಇಂಥ ಹುಡುಗ ಸಿಗೋದು ತುಂಬಾನೇ ಕಷ್ಟ ಬಿಡಿ.. "..ಸುಮ್ಮನಿರೆ ಅಧಿಕ ಪ್ರಸಂಗಿ ಎಂದು ಗದರಿದೆ..ಮನದಲ್ಲೇ ಅವಳ ಮಾತಿಗೆ ತಲೆದೂಗುತ್ತ..ಅವಳು ಹೇಳಿದ್ದು ಸರಿ ಅಲ್ವನ್ರೆ?..ನೀವು ಹೇಗೆ ನಿಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು.ಒಬ್ಬನಲ್ಲೇ ನಿರೀಕ್ಷಿಸುವುದು ತಪ್ಪಲ್ಲ್ವನ್ರೆ?..ಅಂದಾಗ ಎಲ್ಲಾರೂ ಸೇರಿ ನನ್ನ ಮೇಲೆ ಮುಗಿಬಿದ್ದರು.."ಏನೇ? ನಮ್ಮ ಬಾಳ ಸಂಗಾತಿ ಹೇಗಿರಬೇಕೆಂದು ನಿರ್ಧರಿಸುವ ಸ್ವಾತಂತ್ರ್ಯ ಕೂಡ ನಮಗಿಲ್ವಾ?"
ಆಗ ನಾನು ಅವ್ರ ಧ್ವನಿಯಲ್ಲೇ ಕೇಳಿದೆ...,"ನಿಮಗೆ ಸ್ವಾತಂತ್ರ್ಯ ಇದೆ ಅಂತ ನಿಮಗೆ ಬೇಕಾದ ಗುಣಗಳನ್ನೆಲ್ಲ ಅವನಲ್ಲಿ ನಿರೀಕ್ಷಿಸುವುದು...ಅವನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಹಾಗೆ ಅಲ್ಲವಾ?"..ನನ್ನ ಮಾತನ್ನೂ ಯಾರೂ ಒಪ್ಪಲು ತಯಾರೇ ಇರಲಿಲ್ಲ...ಬದಲಿಗೆ.., ಅವರು,"ಹುಡುಗರೂ ನಮ್ಮಲ್ಲಿ ತಮ್ಮ ನೆಚ್ಚಿನ ಸಿನಿಮಾ ನಟಿಯರನ್ನು ಕಾಣಲು ಬಯಸ್ತಾರೆ..ತಾನೇ?" ಎಂದಾಗ...ನಾನೇ ನನ್ನ ಸೋಲನ್ನು ಒಪ್ಪಿಕೊಂಡು ಶರಣಾದೆ..
.
ಮೊನ್ನೆ, ಮೊನ್ನೆ..ನಾವೆಲ್ಲಾ ಗೆಳತಿಯರು ಒಟ್ಟಿಗೆ ಸೇರಿದ್ವಿ...ಈಗ ಎಲ್ಲರಿಗೂ ಮದುವೆ ಆಗಿದೆ...ಒಂದಿಬ್ಬರನ್ನು ಬಿಟ್ಟು almost ಎಲ್ಲರದ್ದೂ aaranged marriage ..ಹಳೆಯ ಮಾತನ್ನೇ ನೆನಪಿಸುತ್ತಾ..ಕೇಳ್ದೆ..ನಿಮ್ಮ ಕಲ್ಪನೆಯ ಹುಡುಗನ ಗುಣ ಎಲ್ಲ ನಿಮ್ಮ ಯಜಮಾನರಲ್ಲಿ ಇರಬಹುದು ಆಲ್ವಾ?...ಎಲ್ಲಾರದ್ದೂ ಒಂದೇ ಉತ್ತರ..ಅದ್ಹೇಗೆ ಇರುತ್ತೆ...ನಮ್ಮದೆಲ್ಲ ಎಂಥಾ ಬಾಲಿಶ ಕಲ್ಪನೆ ನೋಡು..ಒಂದು ಹೆಣ್ಣಿಗೆ ಒಂದು ಗಂಡು ಅಂತ ದೇವರೇ ಸೃಷ್ಟಿಸಿದ ಮೇಲೆ ಅದನ್ನು ಬದಲಾಯಿಸೋಕೆ.ಸಾಧ್ಯವಾ?..ಒಮ್ಮೆ ಬದಲಾಯಿಸಿದರೂ..ಅದನ್ನು ನಮ್ಮ ಚಿಂತನೆಗಳಿಂದಲೇ ಹೊರತೂ..ನೋಡುವದರೊಳಗೆ..ಅಂತ perfectonist ನನ್ನು ನಿರೀಕ್ಷಿಸುವುದೇ ತಪ್ಪು ಅಂತೆಲ್ಲಾರೂ ಒಕ್ಕೊರಲಾಗೆ ಹೇಳಿದ್ರು.
ಒಳಗಡೆಯಿಂದ ಟೀ ತರುತ್ತಿದ್ದ ರಂಗಿ ಹೇಳುತ್ತಲೇ ಬಂದಳು...ನೀವು ಎಷ್ಟೋ ಪರವಾಗಿಲ್ಲ ಬಿಡಿ..ಹೊಂದುಕೊಂಡು.ಜೀವನ.ಮಾಡ್ತಿದ್ದೀರಿ...ಪೇಪರ್ ನೋಡಿದ್ದೀರಾ?ಕೇರಳದ ತಿರುವನಂತ ಪುರದಲ್ಲೇ.ದಿನಕ್ಕೆ ಕನಿಷ್ಠ 6 ಜನ ದಂಪತಿಗಳು dievorse ಗೆ application ಹಾಕ್ತಾ ಇದ್ದಾರಂತೆ...ಅಂದಾಗ..ಪರವಾಗಿಲ್ಲ ನಮ್ಮ ರಂಗಿಗೂ ಗೊತ್ತಲ್ಲ ಅಂತ ಖುಷಿ ಆಯ್ತು..
ನನಗೂ ತುಂಬಾನೆ ಅನ್ನಿಸಿದ್ದು ಇದೇ..ಇಂದಿನ ಯುವ ಜನತೆಯ ಅಸಂಭದ್ಧ ನಿರೀಕ್ಷೆಗಳು, ಅನುಚಿತ ಆಕಾಂಕ್ಷೆಗಳೇ ..ಇಂದಿನ ದಿನ dievorse ಸಂಖ್ಯೆ ಜಾಸ್ತಿ ಆಗೋದಕ್ಕೆ ಕಾರಣ ಇರ ಬಹುದು ಅಂತ..ಬೇರೆ ಯಾರನ್ನೋ ನಮ್ಮವರಲ್ಲಿ ಕಾಣುವ ಪ್ರಯತ್ನ ಮಾಡಿದರೆ,ಅದು ಆ ಎರಡೂ ವರ್ಗಗಳಿಗೆ ನಾವು ಮಾಡುವ ಅವಮಾನವೇ ಆಗಿರುತ್ತದೆ..ಇನ್ನೊಬ್ಬರು ಆದರ್ಶರಾಗಿರಲಿ ..ಆದರೆ,,ನಾವು, ನಾವಾಗಿಯೂ ಇರಬೇಕು. ಅಲ್ಲವೇ?
ನಮ್ಮ ರಂಗಿನ ಕೇಳಿ..ನಿನ್ನ ಕನಸಿನ ಹುಡುಗ ಹೇಗಿರಬೇಕೆ? ಅಂತ..ಅವಳ ಉತ್ತರ ಎಷ್ಟು ಸೊಗಸಾಗಿದೆ ಗೊತ್ತಾ?..."ಅಕ್ಕ..ಅವನು, ಅವನಾಗಿದ್ದರೆ ..ಸಾಕು!"...
ಹೌದಲ್ಲವೇ ? ? ? ?
.
hiiiiii.....tumbbaa realistic aagide...very nice....
ಪ್ರತ್ಯುತ್ತರಅಳಿಸಿnija sandyakka, ellarigu idu arta aadre dievorse annode iralla alwa???
ಪ್ರತ್ಯುತ್ತರಅಳಿಸಿ