ಗುರುವಾರ, ಜನವರಿ 19, 2012

ಹೀಗೊಂದು ಮುಂಜಾವು...ಪಾರ್ಕಿನಲ್ಲಿ

ಹಾದಿಗಳು ಕೂಡಿ..ಹಾದಿಗರು ಅಗಲಿ...
ಹೋಗುವದೊಂದು ಹೊತ್ತಿನಲ್ಲಿ..
ಪರಿಚಯವೇ ಇರದ ಪಥಿಕರೆಷ್ಟೋ ಮಂದಿ..
ತುಟಿ ಬಿರಿದು ನಕ್ಕು ಕರೆದರಿಲ್ಲಿ...


ಈ ಒಂದು ಬಗೆ ಮಾತು.ಎದೆಯಾಳದೊಳಗಿಂದ.
ಬಗೆಬಗೆಯ ಗರಿಬಿಚ್ಚಿ ಬಂದ ಹಾಗೆ..
ಕಣ್ಣಂಚಲೊಳಿಳುಕುತಿದೆ ಮಿಂಚುಗಳ ಗೊಂಚಲು  
ಎಷ್ಟೊಂದು ಅರ್ಥಗಳು ಅದರ ಒಳಗೆ..


ಕುಶಲವೇ?..ಎನ್ನುವರು ಕಣ್ಣಿನ ಸನ್ನೆಯಲಿ...
ಸಣ್ಣವಾದಿರಿ..ಎನುವ ಸಣ್ಣ ನಗುವಿನೊಡನೆ..
ಕಿವಿಯಲ್ಲಿ ಸಂಗೀತ ಕೇಳುತಲೇ ನಡೆಯುವರು..
ಓಡುತಲೇ ಪರಿಚಯದ ಒಸಗೆ ಬೀರಿ..

ನೋಡುತಲೆ ನಡೆಯುವೆನು ಇಳಿ ಯೌವನದ
ನವ ಜೋಡಿಯ ಪ್ರೇಮದ ಪರಿಯ...
ಜೊತೆಯಲಿ  ಕೈ ಹಿಡಿದು, ಭುಜವ ಅವರಿಸುತ್ತ
ಸಾವರಿಸಿ ನಡೆಯುತಿಹ ಅವರ ಜೊತೆಯ..


ಹಸಿರುಗಿಡದ ಕಡೆಗೆ ಇಬ್ಬನಿಯ ಹೊಸ ಹಾಡು 
ಮನದೊಳಗೂ ನೂರಾಸೆ ಆಗುತಿಹುದು..
ಹೊರಲೋಕವನು ಮರೆಸಿ.. ಹೊಸಕನಸ ತೆರೆಸುತಿಹ
ಹೊಸ ಭಾವ ಮತ್ತೊಮ್ಮೆ ತುಳುಕುತಿಹುದು....


6 ಕಾಮೆಂಟ್‌ಗಳು:

 1. ಈ ಒಂದು ಬಗೆ ಮಾತು.ಎದೆಯಾಳದೊಳಗಿಂದ.
  ಬಗೆಬಗೆಯ ಗರಿಬಿಚ್ಚಿ ಬಂದ ಹಾಗೆ..
  ಕಣ್ಣಂಚಲೊಳಿಳುಕುತಿದೆ ಮಿಂಚುಗಳ ಗೊಂಚಲು
  ಎಷ್ಟೊಂದು ಅರ್ಥಗಳು ಅದರ ಒಳಗೆ..

  ಸಂಧ್ಯಕ್ಕಾ... its too supper..
  ಸಂಧ್ಯಕ್ಕಾ ಈ ಗ ಮತ್ತೆ ಹೆಡೆ ಬಿಚ್ಚಿದ್ದು..... updates ಬತ್ತಾ ಇದ್ದು.

  ಚಂದಾ ಬೈಂದೇ .....
  ಹಿಂಗೇ ಬರೀತಾ ಇರು.....
  (ಪಂಚರಂಗಕ್ಕಾ..)

  ಪ್ರತ್ಯುತ್ತರಅಳಿಸಿ