ಶುಕ್ರವಾರ, ಡಿಸೆಂಬರ್ 7, 2012

"ಅವನ ನೆನಪೆಂದರೆ..."


   

       "ಅವನ ನೆನಪೆಂದರೆ..."

ಅವನ ನೆನಪೆಂದರೆ...
ಸೋನೆ ಮಳೆಯ ನಡುವೆ ಬರುವ ಸೂರ್ಯನ ಬೆಳಕ
ಸಪ್ತವರ್ಣದ ಕಾಮನಬಿಲ್ಲು..!.

ಅವನ ನೆನಪೆಂದರೆ...
ಹಿಮಾಲಯದ ಬೆಟ್ಟದ ತಲೆಯ ಮೇಲೆ ಬಳಿಸಾರುವ ಬಿಳಿಮೋಡದ ಹೆಗಲುತಾಕಿ..
ಮೈ ಪುಳಕ...!

ಅವನ ನೆನಪೆಂದರೆ...
ತೊರೆಯ ನವಿರು ತಿಳಿನೀರ ಒಳಗೆ ಇಳಿದ ಕಾಲ್ಗಳ ಕೆಳಗೆ
ಮೀನುಮರಿಗಳ ಗುಳುಗುಳು ಕಚಗುಳಿ...!

ಅವನ ನೆನಪೆಂದರೆ..
ಮಳೆಗಾಲದ ಛಳಿ ರಾತ್ರಿಯ ಬಿಸಿ ಹಪ್ಪಳದ ಕುರುಕುಗಳ ಜೊತೆಯಲ್ಲಿ
ಹದ ಬೆಂಕಿಯ ಕಾವು..!.

ಅವನ ನೆನಪೆಂದರೆ...
ತಂಪಾದ ಬೆಳದಿಂಗಳ ರಾತ್ರಿಯಲಿ ತೇಲಿ ಬರುವ
ಸಂಪಿಗೆಯ ಗಂಧ...!

ಅವನ ನೆನಪೆಂದರೆ...
ಎಲ್ಲರ ನೆನಪುಗಳು ಮರೆತೇ ಹೋದರೂ..
ಎಲ್ಲಾ ನೆನಪುಗಳ ಹೆಣ ತೇಲಿ ಹೋದರೂ
ಕೇವಲ ಅವನ ನೆನಪು ಮಾತ್ರ...
ಕೆಳ-ಕೆಳಗೆ ತಳಸೇರಿ..
ಚಿಪ್ಪಿನೊಳಗೇ ಬೆಳೆವ ಬೆಳಕಿನ ಬಿಂದುಗಳು.
ಮುತ್ತುಗಳು...! !

1 ಕಾಮೆಂಟ್‌:

 1. ಅವನ ನೆನಪೆಂದರೆ...
  ತೊರೆಯ ನವಿರು ತಿಳಿನೀರ ಒಳಗೆ ಇಳಿದ ಕಾಲ್ಗಳ ಕೆಳಗೆ
  ಮೀನುಮರಿಗಳ ಗುಳುಗುಳು ಕಚಗುಳಿ...!

  ಮಳೆಗಾಲದ ಛಳಿ ರಾತ್ರಿಯ ಬಿಸಿ ಹಪ್ಪಳದ ಕುರುಕುಗಳ ಜೊತೆಯಲ್ಲಿ
  ಹದ ಬೆಂಕಿಯ ಕಾವು..!.

  so supper.
  ಸಂಧ್ಯಕ್ಕೋ..... ಅನುಭವವಿಲ್ಲದೇ ಹುಟ್ಟುವ ಸಾಲುಗಳೇ ಅಲ್ಲಾ ಇವೆಲ್ಲಾ....

  ಅವನ ನೆನಪೆಂದರೆ..... ನಿಂಗೆ ಏನೆಲ್ಲಾ ಅಲ್ಲಾ....?!!!!

  ಸಂದ್ಯಕ್ಕಾ ರಾಶೀ ಖುಶೀ ಆತೇ....
  ತುಂಬಾ ಚಂದ ಬೈಂದು ನಿನ್ನ ಅವನ ನೆನಪೆಂದರೆ.....

  ಪ್ರತ್ಯುತ್ತರಅಳಿಸಿ