. ಕವನ ಕನವರಿಕೆ.
ನುಡಿಯಲ್ಲವಿದು ಗೆಳೆಯ ಎದೆಯ ಚಡಪಡಿಕೆ
ಸವೆದ ಶಬ್ದಗಳಲ್ಲಿ ಕವನ ಕನವರಿಕೆ.
ಕಳೆದ ಕಾಲವದೆಷ್ಟೋ..ನಿಟ್ಟುಸಿರ ಘಳಿಗೆಗಳು..
ಮರೆತಷ್ಟು ಮೊರೆಯುವುದು ನೆನಪ ಮೆರವಣಿಗೆ..
ಬಿತ್ತಿದ್ದು ಬೆಳೆದಿದ್ದು ಎದೆಯ ಭಿತ್ತಿಯ ತುಂಬಾ
ಹೂವಾಗಿ ಘಮಘಮಿಸೋ ನಿನ್ನ ಮುಖದೊನಪು..
ಸುಳಿಗಾಳಿ, ಎಳೆಮಿಂಚು, ಹನಿಮಳೆಯ ದಿನಗಳಲೂ
ಹಳೆಗಾಯ ಹೊಸತಾಗಿ, ಎದೆ ರಕ್ತ ಕೆಂಪು...
ಹನಿಯೊಂದು ತೆಳುವಾಗಿ ಕಣ್ಣೊಳಗೆ ಕದಲುತ್ತಾ..
ಕಣ್ಣ ಕೆರೆಯಲೆಗಳಲಿ , ನಿನ್ನದೇ ಬಿಂಬ..
ನೀನಲ್ಲಿ ..ನಾನಿಲ್ಲಿ, ಎಲ್ಲಿದ್ದರೆನಂತೆ..
ಭಾವದಲೆಗಳ ಮೇಲೆ ಅನುದಿನದ ಪಯಣ..
ತೇಲಿಬಿಡು ಹೊಸಹೊಸತು ಕನಸುಗಳ ಹೆಣೆ ಹೆಣೆದು
ಇರುಳ ನಕ್ಷತ್ರಗಳ ಬೆಳಕಿನಲೆಗಳಲಿ..
ಇರುಳ ನಕ್ಷತ್ರಗಳ ಬೆಳಕಿನಲೆಗಳಲಿ..
ಸಂದ್ಯಕ್ಕೋ.....ಕವನ ಮಾತ್ರ ತುಂಬಾ ಚಂದ ಬೈಂದೇ.......
ಪ್ರತ್ಯುತ್ತರಅಳಿಸಿ"ನುಡಿಯಲ್ಲವಿದು ಗೆಳೆಯ ಎದೆಯ ಚಡಪಡಿಕೆ
ಸವೆದ ಶಬ್ದಗಳಲ್ಲಿ ಕವನ ಕನವರಿಕೆ."
"ಮರೆತಷ್ಟು ಮೊರೆಯುವುದು ನೆನಪ ಮೆರವಣಿಗೆ.."
ಹನಿಯೊಂದು ತೆಳುವಾಗಿ ಕಣ್ಣೊಳಗೆ ಕದಲುತ್ತಾ..
ಕಣ್ಣ ಕೆರೆಯಲೆಗಳಲಿ , ನಿನ್ನದೇ ಬಿಂಬ..
ಮುತ್ತು ಪೋಣಿಸಿದಂಗಿದ್ದು ಸಾಲು.......
"ನೀನಲ್ಲಿ ..ಎಲ್ಲಿದ್ದರೇನಂತೆ..ಭಾವದಲೆಗಳ ಮೇಲೆ ಅನುದಿನದ ಪಯಣ... "
ಪ್ರತ್ಯುತ್ತರಅಳಿಸಿಮನಕ್ಕೆ ತಟ್ಟುವ ಸಾಲುಗಳು..
ತುಂಬಾ ಚನ್ನಾಗಿ ಬರೆದಿದ್ದೀರಿ... keep up the good work...
ಬಹಳ ಚಂದದ ಭಾವ ಸಾಲುಗಳು...
ಪ್ರತ್ಯುತ್ತರಅಳಿಸಿತುಂಬಾ ಇಷ್ಟವಾಯ್ತು..
ಅಭಿನಂದನೆಗಳು ಚಂದದ ಸಾಲುಗಳಿಗೆ...
Kavana kanavarikeyalla, manada thudike. Bharavanige thumbane nidhanagathi,Yake? Sandhyakkana Kavanada salugannodhalu kushi! It touches the heart, really.
ಪ್ರತ್ಯುತ್ತರಅಳಿಸಿಕವನ ಚೆನ್ನಗಿದೆ ಆದ್ರೆ (ಮೊರೆಯೂವುದು)ಇದರ ಅರ್ಥ್ ತಿಳಿಯಲಿಲ್ಲಾ...
ಪ್ರತ್ಯುತ್ತರಅಳಿಸಿಕವನ ಚೆನ್ನಗಿದೆ ಆದ್ರೆ (ಮೊರೆಯೂವುದು)ಇದರ ಅರ್ಥ್ ತಿಳಿಯಲಿಲ್ಲಾ...
ಪ್ರತ್ಯುತ್ತರಅಳಿಸಿ