ಬುಧವಾರ, ಜನವರಿ 23, 2013

ಒಮ್ಮೆ ಸತಾಯಿಸುತ್ತೇನೆ....





ನೀ, ನನ್ನ ಅನುಮತಿ ಕೇಳಿದ ಘಳಿಗೆಯೇ
ಸಮ್ಮತಿಸು ಎನ್ನದಿರು ಇನಿಯಾ...
ಬದುಕಿನಲ್ಲೊಮ್ಮೆ ದಕ್ಕುವ 
ಮಧುರತೆಯೂ ಕೈ ಜಾರಿ ಹೋದೀತು...
ಒಮ್ಮೆ ಸತಾಯಿಸುತ್ತೇನೆ...
ಕೊಸರಿಕೊಂಡು ನಿನ್ನ ತೆಕ್ಕೆಯ....

ನಿನ್ನ ನೆನಪಲ್ಲೇ ಬೆಂದು ಹೋಗುತ್ತೇನೆ...

ನನ್ನ ಮನದ ಕುಲುಮೆಯಲ್ಲಿ ನೀನೇ ಚಿನ್ನ...
ನಾ ಬೆಂದಷ್ಟೂ ನಿನ್ನ  ಹೊಳಪು ಹೆಚ್ಚು...
ಚಿನ್ನ, ಚಿನ್ನಾ..ಎನ್ನುತ್ತಲೇ 
ಒಮ್ಮೆ ಸತಾಯಿಸುತ್ತೇನೆ...
ಕೊಸರಿಕೊಂಡು ನಿನ್ನ ತೆಕ್ಕೆಯ... 

ಬದುಕು ತುಂಬುವ ನಿನ್ನ ಪ್ರೀತಿ..

ಕಣ್ಣು ತುಂಬುವ ನಿನ್ನ ಕಂಗಳ ಹೊಳಪು,
ದಕ್ಕಿದ ಮೇಲೆ ಸತಾಯಿಸಲಾರೆ...
ನೀನು ನನ್ನವನು...
ಎನ್ನುತ್ತ ಸುಮ್ಮನೆ ಸಮ್ಮತಿಸುತ್ತೇನೆ
ನಿನ್ನ ತೆಕ್ಕೆಯೊಳಡಗುತ್ತ...

3 ಕಾಮೆಂಟ್‌ಗಳು:

  1. ನೀ, ನನ್ನ ಅನುಮತಿ ಕೇಳಿದ ಘಳಿಗೆಯೇ
    ಸಮ್ಮತಿಸು ಎನ್ನದಿರು ಇನಿಯಾ...
    ಬದುಕಿನಲ್ಲೊಮ್ಮೆ ದಕ್ಕುವ
    ಮಧುರತೆಯೂ ಕೈ ಜಾರಿ ಹೋದೀತು...
    ಒಮ್ಮೆ ಸತಾಯಿಸುತ್ತೇನೆ...
    ಕೊಸರಿಕೊಂಡು ನಿನ್ನ ತೆಕ್ಕೆಯ....

    ಸಂದ್ಯಕ್ಕಾ..... ಎಂಥಹ ಸಾಲುಗಳು.........
    ಎಷ್ಟೋ ಅಪರೂಪಕ್ಕೊಂದು ಬಂದ್ರೂ..... ಬಂಗಾರಾ ಬಂಗಾರಾ......

    ಅದಕ್ಕೇ ಹೇಳೋದು ಬರಹಕ್ಕೆ ಭಾವನೆಗಳಿಗೆಲ್ಲಾ ಮುಪ್ಪಿಲ್ಲ ಅಂತಾ....
    ಒಂದಿಷ್ಟು ರಸಿಕತೆ, ಒಂದಿಷ್ಟು ಹುಸಿಮುನಿಸು, ಬಹಳಷ್ಟು ಪ್ರೀತಿ ಸೇರಿದ
    ಅತಿ ಚಂದದ ಕಂಪು ಕಂಪು ಕವನ....

    ತುಂಬಾ ಇಷ್ಟವಾಯ್ತಲ್ರೀ....

    ಪ್ರತ್ಯುತ್ತರಅಳಿಸಿ