ಮರೆಯಾಗದ ನೀನು............
ಕನಸುಗಳು....
ಕನಸುಗಳು..ಯಾರಿಗೂ ಕಾಯುವುದಿಲ್ಲ.
ಅವುಗಳು ನಿದ್ದೆಯೊಂದಿಗೆ ಮುಗಿದುಹೋಗುತ್ತವೆ...
ನೆನಪುಗಳು...
ನೆನಪುಗಳು ಯಾರನ್ನೂ ನಿರೀಕ್ಷಿಸುವುದಿಲ್ಲ.
ಅವು ಮರೆವಿನೊಂದಿಗೆ ಇಲ್ಲವಾಗುತ್ತವೆ...
ಚಿಂತೆಗಳು...
ಚಿಂತೆಗಳು ಯಾರನ್ನೂ ನೆಚ್ಚಿಕೊಳ್ಳುವುದಿಲ್ಲ.
ಸಿಕ್ಕವರನ್ನು ಕಾಡಿ ಕಣ್ಮರೆಯಾಗುತ್ತವೆ.
ನಿನ್ನೆಗಳು...
ನಾಳೆಗಾಗಿ ನಲಿಯುವುದಿಲ್ಲ..
ಇವತ್ತಿನ ಬೆಳಗಿನೊಂದಿಗೆ ಮರೆಯಾಗುತ್ತವೆ...
ಆದರೆ ನಾನು..
ನಿನಗಾಗಿ ಕಾಯುತ್ತೇನೆ..ಕಾತರಿಸುತ್ತೇನೆ.
ಕನವರಿಸುತ್ತೇನೆ..
ನಿರೀಕ್ಷಿಸುತ್ತೇನೆ,,,ನೆಚ್ಚಿಕೊಳ್ಳುತ್ತೇನೆ..
ಆದರೂ..
ನೀ ಬರುವುದಿಲ್ಲ..
ಹಾಗೆಂದು ..ನೀ
ಮುಗಿದು ಹೋಗುವುದೂ ಇಲ್ಲ..
ಮರೆಯಾಗುವುದೂ ಇಲ್ಲ..
ಯಾಕೆಂದರೆ..
ನೀನು ಬರೀ"ನೀನಲ್ಲ"
ನಿನ್ನಲ್ಲಿರುವ.."ನಾನೇ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ