ಶುಕ್ರವಾರ, ಡಿಸೆಂಬರ್ 11, 2009

ದುಡಿಯುವ ಹೆಣ್ಣಿಗೇಕೆ ಇಷ್ಟು ಗಿಲ್ಟು?...

ಅಡಿಗೆ ಮನೆಯಲ್ಲಿ ತಿಂಡಿ ಮಾಡುತ್ತಿದ್ದೆ.. ರಂಗಿ ಧಾವಂತವಾಗಿ  ನನ್ನ ಹತ್ರ ಬಂದಳು..ಅವಳು ಬರೋ speed ಗೆ ನಂಗೆ ಗೊತ್ತಾಗ್ತಿತ್ತು,,ಇವತ್ತು ಏನೋ ವಿಶೇಷ ಸುದ್ದಿ ಇರುತ್ತೆ ಅಂತ..ಆದರೂ ತೋರಿಸಿಕೊಳ್ಳದೆ.. ರಂಗಿ.ಚೂರು ತರಕಾರಿ ಕಟ್ ಮಾಡೇ..ಆಫೀಸಿಗೆ ಲೇಟಾಯ್ತು..ಅಂದೆ..ಹ್ಞೂ ಅನ್ನುತ್ತಲೇ..ಅಂದ್ಲು..ಅಕ್ಕಾ,, ಪಕ್ಕದ ಮನೆ ಗೋಪಣ್ಣ ರಾಧಕ್ಕನಿಗೆ ಬಯ್ತಾ ಇದ್ದ..ಅವರ ಮನೆ .ಪಾಪುಂಗೆ   ಕಡಿಮೆ marks ಬಂತಂತೆ,,ಅದಕ್ಕೆ..ನಾನು ಅದು ಎಲ್ಲಾ ಮನೇಲಿ ಇದ್ದಿದ್ದೆ ಬಿಡು ರಂಗಿ..ಅಂದೆ..ಅವಳು ಬಿಡಬೇಕಲ್ಲ..ಯಾಕಕ್ಕಾ?..ಈಬ್ಬರೂ ಕೆಲಸಕ್ಕೆ ಹೋದಾಗ  ಒಬ್ಬರನೆ ಯಾಕೆ ಬಯ್ಬೇಕು ಹೇಳಿ? ಆದ್ರೆ ರಾಧಕ್ಕ ಮಾತ್ರ ತಂದೆ ತಪ್ಪು ಇದ್ಯೇನೋ ಅಂತ ಈಗ್ಲೂ ಒಂಥರಾ ಇದ್ದಾರಕ್ಕಾ..ಅಣ್ಣ ಬಯ್ದಿದ್ದಕ್ಕಲ್ಲ..ಯಾಕೆ ಹೀಗೆ ? ಅಂದಳು...ನಂಗೂ ಹೌದಲ್ವಾ ಅನ್ನಿಸ್ತು..ಮೊನ್ನೆ ನಮ್ಮಲ್ಲೂ 8 ದಿನ ಉಳಿಯಲು ಬಂದ ಶಾಂತತ್ತಿಗೆ 2 ದಿನಕ್ಕೆ ಹೊರಟು ನಿಂತಾಗ  ಹೀಗೆ ಅನ್ನಿಸಿ..ಒಂಥರಾ ಗಿಲ್ಟು ಕಾಡಿತ್ತಲ್ಲಾ ..ಅನ್ನಿಸತೊಡಗಿತು..ಅದ್ರ ಜೊತೆಗೆ..ನಮ್ಮ ಮನೆಯಲ್ಲಿ ಮೊನ್ನೆ ಆದ cold war  ನೆನಪಾಗಿ.ಮನಸ್ಸೇಕೋ..ಕಸಿವಿಸಿಗೊಳ್ಳುತ್ತಿದ್ದಂತೆ....ಸಂಧ್ಯಾ ತಿಂಡಿ ಆಯ್ತನೆ.ಎಂದು .ಹೊರಗಡೆ ನನ್ನವನ ಕೂಗು....ನಾನು ಇದೆ ಸಮಯ ಅಂತ ಶುರು ಹಚ್ಚಿಕೊಂಡೆ..ಅವ್ರು .ನಮ್ಮ ಮಾತು ಕೇಳ್ತಿದ್ದಾರೆ ಅಂತ ಗೊತ್ತಿತ್ತು..."ರಂಗಿ..ಬೇಕಾದ್ರೆ..ನೀನು ಯಾವುದೇ ದುಡಿಯುವ ಹೆಣ್ಣನ್ನು ಕೇಳಿನೋಡು.ಅದರಲ್ಲೂ ನೌಕರಿ ಮಾಡುವ ನಮ್ಮಂಥ ಪ್ರತಿಯೊಬ್ಬ ಗೃಹಿಣಿಯರಲ್ಲಿ  ಒಂದು ತೆರನಾದ ಅಪರಾಧಿ ಪ್ರಜ್ಞೆ ಮನೆಮಾಡಿಬಿಟ್ಟಿರುತ್ತದೆ..ಗಂಡನ ಜೊತೆ ಹೆಚ್ಚು time spend ಮಾಡ್ತಾ ಇಲ್ಲ..ಓದುತ್ತಿರುವ ಮಗನ ಬಗ್ಗೆ ಜಾಸ್ತಿ ಗಮನ ಕೊಡ್ತಾ ಇಲ್ಲ..ವಯಸ್ಸಾದ ಅತ್ತೆ, ಮಾವಂದಿರನ್ನು ಸರಿಯಾಗಿ ನೋಡ್ಕೊಳಕಾಗ್ತಿಲ್ಲ..ಅಪ್ಪನಿಗೆ ಹುಷಾರಿಲ್ಲ ಅಂತ ಗೊತ್ತಾದರೂ ಊರಿಗೆ ಹೋಗಲಿಕ್ಕಾಗ್ತಿಲ್ಲ..ತವರಿನವರು ಬಂದಾಗ ಅವರೊಂದಿಗೆ ಹರಟಲು ಕೂಡ ಪುರುಸೊತ್ತಿಲ್ಲ...ಹೀಗೆ..ನೂರೆಂಟು ಕಾರಣಗಳು..ಒಮ್ಮೊಮ್ಮೆ ಕಾರಣದ ಅಗತ್ಯವೂ ಇರದೇ..ನಾವು ಮನೆಯಿಂದ 8-9 ಗಂಟೆ ಕಳೆಯಬೇಕಾಗುತ್ತಲ್ಲಾ..ಅನ್ನೋ   ಅಂಶವೇ ನಮ್ಮನ್ನು ಒಂಥರಾ guilty..ಅನ್ನಿಸಿಬಿಡೋದು....,
ನೀನೇನೆ ಹೇಳು.. .ಹೆಂಗಸರ ಬಾಳು ನಿಜಕ್ಕೂ ದುರ್ಭರ ! ...ಅದರಲ್ಲೂ, ನೌಕರಿ ಮಾಡುವ ಹೆಂಗಸರದ್ದು... ಅದೆಷ್ಟೇ ಜತನದಿಂದ ತನ್ನೆಲ್ಲ ಕರ್ತವ್ಯ ಮಾಡಿದರೂ ಯಾರಿಗೋ ಏನೋ ಕೊರತೆ ಮಾಡಿಬಿಟ್ಟೆ.. ಅನ್ನೋ ಕೊರಗು ಬಿಡೋದೇ ಇಲ್ಲ ಅನ್ಸುತ್ತೆ... ಜೊತೆಗೆ ಸಂಸಾರದ ಸೂತ್ರದಲ್ಲಿ ಏನೇ ಏರುಪೇರಾದರೂಅದರೆಲ್ಲ ಅಪರಾಧವೂ ಮೊದಲು ಬೀಳೋದು ನಮ್ಮ ತಲೆಗೇ..ಮಗನಿಗೆ maths ನಲ್ಲಿ  ಕಡಿಮೆ ಮಾರ್ಕ್ಸ್ ಬಂದಿದ್ದಕ್ಕೆ, ಒಂದು ವಾರ ಇರ್ತೀನಿ ಅಂತ ಬಂದ ನಾದಿನಿ ಎರಡು ದಿನಕ್ಕೆ ಹೊರತು ನಿಂತಿದ್ದಕ್ಕೆ, ಗಂಡನ ಕ್ರೆಡಿಟ್ ಕಾರ್ಡ್ ಕಳೆದು ಹೋಗಿದ್ದಕ್ಕೆ...ಹೀಗೆ,,ಎಲ್ಲದಕ್ಕೂ ನಾವೇ ಮೂಲ..."ನೀನೋಬ್ಲು ಸರಿಯಾಗಿದ್ರೆ.." ಅನ್ನೋ ರಾಗ ಮಾಮೂಲು...ತನ್ನೆಲ್ಲ ಕರ್ತವ್ಯಗಳನ್ನು ನಿರ್ವಹಿಸೋದಕ್ಕೆ ಕೆಲಸ ಮಾಡೋದಕ್ಕೆ ನಮಗೂ ಇರೋದು 24 ಗಂಟೆಗಳಷ್ಟೇ ಅನ್ನೋದನ್ನು ಯಾಕೆ ಅಷ್ಟು ಸುಲಭವಾಗಿ ಮರೆತು..ನಮ್ಮನ್ನು ಅಪರಾಧಿಗಳನ್ನಾಗಿಸಿಬಿಡ್ತಾರೆ?"ಅನ್ನುತ್ತ..ನನ್ನ ಭಾಷಣ ಜೋರಾಗಿಯೇ ಮಾಡುತ್ತಿದ್ದೆ..ಅನ್ಸುತ್ತೆ..

ಸಣ್ಣಗೆ ರಂಗಿಯ ಮಾತು ಶುರು ಆಯ್ತು..ಅದಲ್ಲ  ಅಕ್ಕಾ.....mostly..ಇದಕ್ಕೆ ಕಾರಣ..ಈಗ ಹೆಣ್ಣಿನ ಪಾತ್ರ ಮೂಲದಿಂದಲೇ ಬದಲಾಗಿದೆ ಅನ್ನೋದನ್ನು ನಾವ್ಯಾರೂ ಒಪ್ಪಿಕೊಳ್ಳೋಕೆ ತಯಾರಿಲ್ಲದೆ ಇರೋದು..ನಾವು ಯಾವಗಲೂ ಹೆಣ್ಣಿನ ಸ್ಥಾನವನ್ನು ಮನೆಯಲ್ಲೇ..ಗಂಡ, ಮನೆ, ಮಕ್ಕಳ ಆರೈಕೆಯಲ್ಲೇ..ಎನ್ನೋ ಹಲವರು ಶತಮಾನದಿಂದ ನಡೆದು ಬಂದ ರೂಢಿ..,,ಕೇವಲ 40-50 ವರ್ಷಗಳ ಬದಲಾವಣೆಯ ಗಾಳಿಯನ್ನು ಅಲ್ಲದಿಸೋಕೆ..ಹೇಗೆ ಸಾಧ್ಯ ಅಕ್ಕಾ..ಅಂದ್ಲು.ತಣ್ಣಗೆ..ಅರೆ!..ಹೌದಲ್ವಾ?.ಎಂದು ಆಕೆಯೆಡೆ ಕಣ್ಣರಳಿಸಿದೆ..ಆಕೆ ಮುಂದುವರಿಸಿದಳು.....ಮನೆಯಿಂದಾಚೆಗೆ ತನ್ನ ಒಂದು "identity"ಯನ್ನು ಗುರುತಿಸಿಕೊಲ್ಲೋಕೆ ಹೊರಡೋ ಹುಡುಗಿಯರು...ಗಂಡನ ಪುಟಗೋಸಿ ಆದಾಯಕ್ಕೆ ತನ್ನದೂ ಒಂದು ಚೆಕ್ಕನ್ನು ಸೇರಿಸಿ ಸಂಸಾರ ರಥಕ್ಕೆ ಪೆಟ್ರೋಲ್ ತುಂಬೋ ಹಲವು ಹೆಂಗಸರು.ಇದಕ್ಕೆ..ಒಂಥರಾ..ವಿಚಿತ್ರ ತಳಮಳದಲ್ಲಿ ಇರೋದೇನೋ.ಏನನ್ನೋ ನಾವು ಅನಗತ್ಯವಾಗಿ ಬದಲಾಯಿಸಿ ಬಿಟ್ಟಿದ್ದೀವಿ ಅಂತ..ಬಹಳಷ್ಟು ಗಂಡಸರಿಗೆ ಹೆಂಡತಿ ತರುವ ಚೆಕ್ಕೆನೋ ಬೇಕು, ಅದರ ಹಿಂದಿರುವ ಜವಾಬ್ದಾರಿಗಳಲ್ಲ..ಎಲ್ಲ ಒತ್ತಡಗಳೂ ಪಾಪದ ಹೆಂಡತಿಯ ತಲೆಯ ಮೇಲೆ..ನೌಕರಿಯಿಂದ ಸ್ವಲ್ಪ ಆರ್ಥಿಕ ಸ್ವಾವಲಂಬನೆ,ಆತ್ಮಸ್ಥೈರ್ಯ, ಸಿಗೋದು ನಿಜವಾದ್ರೂಅದೆಲ್ಲವನ್ನೂ ..."ನಾನು ಮಗೂಗೆ, ಗಂಡನಿಗೆ ಅನ್ಯಾಯ ಮಾಡುತ್ತಿದ್ದೆನಾ..?" ಅನ್ನೋ ಕೊರಗು ತಿಂದು ಹಾಕಿರುತ್ತದೆ . ನಮ್ಮ ಕೆಲಸದಲ್ಲಿ ಹೆಚ್ಚು ಸಮಯ ಕಳೆಯ ಬೇಕಾಗಿ ಬಂದಷ್ಟೂ ನಮ್ಮ ಗಿಲ್ಟು ಇನ್ನೂ ಹೆಚ್ಚಾಗಿರುತ್ತದೆ...ಮನೆಯನ್ನು ನಾನು ಕಡೆಗನಿಸುತ್ತಿದ್ದೆನಾ ಅನ್ನೋ ಭಯ ಶುರು ಆಗುತ್ತದೆ...ಆದರೆ ಗಂಡಸು ಅನ್ನಿಸಿಕೊಂದವರಿಗೆ..ತಮ್ಮ ಕೆಲಸದಲ್ಲಿ ಹೆಚ್ಚು ಸಮಯ ಕಳೆದಷ್ಟೂ ಅವ್ರ ಹಣ್ಣು, ಅಭಿಮಾನ., ಪ್ರತಿಷ್ಠೆಗಳು ಉಬ್ಬುತ್ತವೆ...ಎಷ್ಟಾದರೂ ಅವರು ಕಷ್ಟ ಪಡೋದು...'ಅವನ ಹೆಂಡತಿ, ಮಕ್ಕಳಿಗಲ್ಲವೇ ?"
ಹೀಗೆ ನಮ್ಮ ಮಾತುಗಳೂ ಮುಂದೆ ಸಾಗುತ್ತಿತ್ತು..mostly..it was quite interesting,,ಹಾಲ್ನಲ್ಲಿ ಟಿವಿ ಸದ್ದು ಸಣ್ಣಗಾಗಿತ್ತು..ನಾನಂದೆ..ರಂಗಿ ಮತ್ತೆ..ಈ ಗಿಲ್ಟಿಗೆ ಪರಿಹಾರವೇ ಇಲ್ವೇನೆ? ..ಯಾಕಿಲ್ಲ ಅಕ್ಕಾ..ಗಂಡ ಹೆಂಡತಿ ಇಬ್ಬರೂ ದುಡಿಯಲೇ ಬೇಕು ಅಂದುಕೊಂಡಾಗ ಒಂದಿಷ್ಟು ಹೊಂದಾಣಿಕೆಗಳು, ತ್ಯಾಗಗಳು ಅನಿವಾರ್ಯ...just can't help it'ಜೊತೆಗೆ ಮನೆಗೆಲಸದಲ್ಲಿ ಗಂಡ ಹೆಲ್ಪ್ ಮಾಡೋದು ಏನೇನೂ ತಪ್ಪಿಲ್ಲ,infact, ಅದು ಅವನ ಕರ್ತವ್ಯ!..ಆಗ ಮಾತ್ರ guilt ಸ್ವಲ್ಪ  ಮಟ್ಟಿಗೆ ಕಡಿಮೆ ಆಗಬಹುದು..ಆಲ್ವಾ ಅಕ್ಕಅಂದ್ಲು..ನಾ ಅವಳ ಮುಖವನ್ನೇ ನೋಡ್ತಿದ್ದೆ..ಹೊರಗಡೆ..ಜಗ್ಗು, ಸಂಧ್ಯಾ.ನಿಮ್ಮ ಮಾತು ಮುಗಿಯಲ್ಲಾ ಅನ್ನಿಸುತ್ತೆ..ನಾನು ಪಾಪುಂಗೆ ಸ್ನಾನ ಮಾಡ್ಸ್ತೀನೆ..ಆಮೇಲೆ ತಿಂಡಿ ಕೊಡು ಅಂದ..ಇದೇನಪ್ಪಾ ಪರಮಾಶ್ಚರ್ಯ ಅಂತ ನೋಡುತ್ತಿದ್ದರೆ  ..ರಂಗಿ  ಎಂದಿನ ಮುಗ್ಧ ನಗು ನಕ್ಕಳು..bathroomಲ್ಲಿ ಮಗರಾಯನ ಗಲಾಟೆ ಮುಗಿಲೆರಿತ್ತು..ಮೊದಲ ಬಾರಿ ಅವನಪ್ಪ ಸ್ನಾನ ಮಾಡಿಸಿದ್ದಕ್ಕಿರಬಹುದು..ಅಮ್ಮಾ,ರಂಗಿ..ನೀವೇ ಬನ್ನಿ..ಅಪ್ಪ ಕಣ್ಣಿಗೆ ಸೋಪು ಹಚ್ಹ್ತಾರೆ..ಅಂತ..ಕೂಗು ಬೇರೆ...ಮತ್ತೊಮ್ಮೆ ಇಬ್ಬರೂ ಜೋರಾಗಿ ನಕ್ಕೆವು..ಅದ್ರ ಅರ್ಥ..ನಮ್ಮಿಬ್ಬರಿಗೂ ಆಗಿತ್ತು...

9 ಕಾಮೆಂಟ್‌ಗಳು:

  1. ಹಾಯ್..ನೋಡಿ ಖುಷಿ ಆತು..try to write like this...good..keep the habit of writing.

    ಪ್ರತ್ಯುತ್ತರಅಳಿಸಿ
  2. hey, super... ondu kushi andre, eegeega idella ellarigu arta agta ide. matte, jana tam javabdaari bagge swalpa serious agta idare.. Arun

    ಪ್ರತ್ಯುತ್ತರಅಳಿಸಿ
  3. hai madam ! nice to see your blog ! thumba chennagide ! heegeye continue madi ! all the best !

    ಪ್ರತ್ಯುತ್ತರಅಳಿಸಿ
  4. hi..I know sndhya..but..who is this rangi??..tumbaa cute..aagiddaale..bhaava dinaa maganna snana madstaa iddaaraa?

    ಪ್ರತ್ಯುತ್ತರಅಳಿಸಿ
  5. hey madam ! super ! thumba chennagide ! nimma barvanige shyli heege sada munduvariyali ! all the best !

    ಪ್ರತ್ಯುತ್ತರಅಳಿಸಿ
  6. ಪರಿಹಾರ ಇದೆ. ನಿಜವಾಗಿಯೂ ಇಬ್ಬರೂ ದುಡಿಯೋ 'ಅಗತ್ಯ' ಇದೆಯಾ ಅಂತ ಮೊದಲು ಕೇಳಿಕೊಳ್ಳಿ. ಗಂಡನ ಆದಾಯವೇ ಒಂದು ಒಳ್ಳೆಯ ಬದುಕಿಗೆ ಸಾಕಾಗುವಷ್ಟಿದ್ದರೆ ಹೆಣ್ಣು ಹೊರಗೆ ಕಷ್ಟಪಡುವ ಅಗತ್ಯ ಇರುವುದಿಲ್ಲ . ಆದರೆ ಈ 'ಒಳ್ಳೆಯ ಬದುಕು' ಅನ್ನುವುದು ನಿಮ್ಮ ಮೇಲೇ ಅವಲಂಬಿತ. ನಿಮಗೆ ಲಕ್ಶುರಿ ಲೈಫ್ ಬೇಕೋ, ಶ್ರೀಮಂತಿಕೆ ಬೇಕೋ, ಅಥವಾ ಪ್ರತಿಷ್ಠೆ ಸ್ವಾಭಿಮಾನ ಬೇಕೋ.... ಇದೆಲ್ಲಾ ನೋಡಿಕೊಂಡರೆ ಅಗತ್ಯ ಇರುವಾಗ ದುಡಿದು , ಕುಟುಂಬಕ್ಕೆ ತಮ್ಮ ಅಗತ್ಯ ಇರುವಾಗ ಅದಕ್ಕೆ ಆದ್ಯತೆ ಕೊಟ್ಟರೆ ಯಾವ್ ಗಿಲ್ಟೂ ಇರಲ್ಲ.

    ಪ್ರತ್ಯುತ್ತರಅಳಿಸಿ