ನಾನು ಮತ್ತು ನನ್ನ ಏಕಾಂಗಿತನ.....
ಸದಾ ನುಡಿಯುತ್ತಿರುತ್ತದೆ ಹೀಗೆ,
ನೀನಿದ್ದರೆ ಹೀಗಿರುತ್ತಿತ್ತು,ಹಾಗಿರುತ್ತಿತ್ತು.
ನೀನು ಹೀಗೆ ನಗಿಸುತ್ತಿದ್ದೆ, ಹಾಗೆ ಛೇಡಿಸುತ್ತಿದ್ದೆ,
ಅರಿವಿದೆ...,
ಅರಿವಿದೆ, ನನಗೆ ನಲ್ಲ,
ಇದು ನನ್ನ ಭ್ರಮೆ ಮಾತ್ರ, ಇಲ್ಲಿ ನೀನಿಲ್ಲ...
"ಇರುಳಲ್ಲವಿದು ನಲ್ಲೆ,.. ಇದು ನಿನ್ನ ಕಪ್ಪನೆಯ ಹೆರಳು,
ಬೆಳದಿಂಗಳಲ್ಲ ಇದು.., ತಿಂಗಳಲಿ ಮಿಂದ ನಿನ್ನ ಮೈ ನೆರಳು,
ಚಂದಿರನಲ್ಲ ಅವ,....... ನಿನ್ನ ಹೊಳೆವ ಕೆನ್ನೆಗಳು,
ತಾರೆಗಲ್ಲ ಅವು,.... ನಗುವ ನಿನ್ನ ಕಣ್ಣಚುಕ್ಕಿಗಳು"
ಎಂದುಲಿದ ನಿನ್ನ ನುಡಿ ಗಾಳಿಯಲಿ ತೇಲಿಬಂದಂತಾಗಿ,,
ತರಗೆಲೆಗಳ ಸದ್ದಿನಲ್ಲಿ..ನೀ ಕಿವಿಯಲ್ಲಿ ನುಡಿದಂತಾಗಿ,,
ನಿಟ್ಟುಸಿರಿಡುತ್ತೇನೆ......
ಅರಿವಿದೆ,,,,,
ಅರಿವಿದೆ... ನನಗೆ ನಲ್ಲ..
ಇದು ನನ್ನ ಭ್ರಮೆ ಮಾತ್ರ, ಇಲ್ಲಿ ನೀನಿಲ್ಲ.....
ಅಸಹಾಯಕತೆಯ ದಿನಗಳಿವೆ, ನನ್ನಲ್ಲೂ-ನಿನ್ನಲ್ಲೂ,
ಒಂಟಿತನದ ಕಡುರಾತ್ರಿಗಳಿವೆ, ನನ್ನಲ್ಲೂ-ನಿನ್ನಲ್ಲೂ,
ಹೇಳಿಕೊಳ್ಳಲು ಬಹಳವಿದೆ ನಲ್ಲಾ, ಆದರೆ ಹೇಳಲೆಂತು?
ಹೇಳು, ನನ್ನದೆಯ ನೋವನ್ನು ಸಹಿಸಲೆಂತು?
ಒಪ್ಪಿಕೊಳ್ಳುತ್ತೇನೆ .. ,
ನನಗೆ ಪ್ರೀತಿ ಇರುವುದು ನಿನ್ನಲ್ಲಿ ಮಾತ್ರ,
ಆದರೆ.....
ಜಗದ ಜಂಜಡದ ಸರಪಳಿಯ ಕಿತ್ತೆಸೆಯಲೆಂತು?
ನನ್ನ-ನಿನ್ನಯ ನಡುವಿನ ಗೋಡೆಯ ಕೆಡವಲೆಂತು?
ಇಂಥ ಭಾವನೆಯ ಅನುದಿನದ ನರಳುವಿಕೆಯಿದೆ,
ನನ್ನಲ್ಲೂ-ನಿನ್ನಲ್ಲೂ.....
cholo iddu
ಪ್ರತ್ಯುತ್ತರಅಳಿಸಿmai our meri thanhai aksar ye baathe karthe hai....:),,,
ಪ್ರತ್ಯುತ್ತರಅಳಿಸಿthumba chennagide...